Image

Events

ಅಪ್ಪು ಅಭಿನಯದ ಯುವರತ್ನ ಸಿನಿಮಾದಂತೆ ವಿದ್ಯಾರ್ಥಿಗಳಿಗೆ ಕಲಿಸಬೇಕಿದೆ.ರವಿಕುಮಾರ್.

ಸಾಫ್ಟ್ ಸ್ಕೀಲ್ ತರಬೇತಿಯು ಬೋಧಕರು ಕೂಡ ತರಬೇತಿಯನ್ನು ಪಡೆಯುವುದು ಅವಶ್ಯಕತೆ ಇದೆ.ಹಿಂದೆ ಇರುವ ಬೋಧನಾ ಪದ್ದತಿ ಬೇರೆಯದ್ದಾಗಿತ್ತು ಈಗಿನ ಬೊಧನಾ ಪದ್ದತಿ ಬೇರೆಯಿದೆ.ವಿದ್ಯಾರ್ಥಿಗಳನ್ನು ಅರಿತು ಬೊಧನೆ ಮಾಡಬೇಕಾದIMG 20220127 WA0012

ಅವಶ್ಯಕತೆ ನಮಗೆ ಇದೆ.ನಮ್ಮ ವೈಯಕ್ತಿಕ ಹಾಗೂ ವಿದ್ಯಾರ್ಥಿಗಳಿಗೆ ಕಲಿಸಲು ಈ ರೀತಿಯ ಕಾರ್ಯಾಗಾರಗಳು ಅನುಕೂಲ ಆಗಲಿದೆ. ಈಗಿನ ಜನಮಾನಕ್ಕೆ ತಕ್ಕಂತೆ ಕಲಿಸಲು ಈ ತರಬೇತಿ ಅವಶ್ಯಕವಾಗಿದೆ.ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ನಮಗಿಂತ ಸ್ಪೀಡಾಗಿದ್ದು ಅವರ ಸ್ಪೀಡಿಗೆ ತಕ್ಕಂತೆ ಕಲಿಸಲು ಈ ರೀತಿಯ ಕಾರ್ಯಾಗಾರಗಳು ಅವಶ್ಯಕತೆ ಇದೆ ಅಂಥಾ ಕೌಶಲ್ಯಾಭಿವೃದ್ದಿ ಅಧಿಕಾರಿಯಾದ ಪಿ.ಎಸ್.ಹಟ್ಟಪ್ಪ ಅವರು ಹೇಳಿದರು.

ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಹಾನಗಲ್ ಶ್ರಿ ಕುಮಾರೇಶ್ವರ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಫ್ಟ್ ಸ್ಕೀಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಸರ್ಕಾರ ಕೌಶಲ್ಯಾಭಿವೃದ್ದಗೆ ಹೆಚ್ಚು ಒತ್ತನ್ನು ನೀಡಿದೆ. ಆ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಕಲಿಸಬೇಕಾದ್ರೇ ನಾವು ಕೂಡಾ ಈ ರೀತಿಯ ಕೌಶಲ್ಯಾಭಿವೃದ್ದಿ ಕಾರ್ಯಾಗಾರವನ್ನು ಆಯೋಜಿಸುವದು ಅವಶ್ಯಕವಾಗಿದೆ ಅಂಥಾ ಹೇಳಿದರು.

ಇದೇ ವೇಳೆ ಶಿಕ್ಷಕರಿಗೆ ತರಬೇತಿಯನ್ನು ನೀಡಿದ ರವಿಕುಮಾರ್ ಅವರು ಮಾತನಾಡುತ್ತಾ ಶಿಕ್ಷಕರು ವಿದ್ಯೆಯನ್ನು ಮಕ್ಕಳಿಗೆ ಶ್ರದ್ಧೆಯಿಂದ ಕಲಿಸಬೇಕಿದೆ.ದಿವಂಗತ ನಟ ಪುನೀತ್ ರಾಜ್‍ಕುಮಾರ್ ಅವರ ಚಿತ್ರ ಯುವರತ್ನದಲ್ಲಿರುವಂತೆ ಮಕ್ಕಳಿಗೆ ನಾವೆಲ್ಲರೂ ಶಿಕ್ಷಣವನ್ನು ನೀಡಬೇಕು ಅಂಥಾ ಹೇಳಿದ ಅವರು ಕಲಿಕೆ ಸೀಮಿತ ಅವಧಿಗೆ ಮಾತ್ರವಲ್ಲ ಇದು ನಿರಂತರವಾಗಿ ಇರುವಂತದ್ದು ಹೀಗಾಗಿ ದಿನನಿತ್ಯ ಕಲಿತರು ಕೂಡಾ ಕಡಿಮೆ ಅಂಥಾ ವಿವರಿಸಿದರು.

ಎರಡು ದಿನಗಳ ಕಾಲ ನಿರಂತರವಾಗಿ ತರಬೇತಿಯನ್ನು ಪಡೆದ ಶಿಕ್ಷಕರು ಕೂಡಾ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಇದೇ ವೇಳೆಗೆ ತರಬೇತಿಯನ್ನು ನೀಡಿದ ರವಿಕುಮಾರ್ ಅವರನ್ನು ಕಾಲೇಜಿನ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಕ್ಷ ಹೆಚ್.ಎಂ.ಕಿರಣಕುಮಾರ್. ಆಡಳಿತ ಮಂಡಳಿಯ ಸದಸ್ಯರಾದ ಹಲ್ಲುಕುಂದಿ.ವಿಜಯಕುಮಾರ್. ಸಂಗನಕಲ್ಲು ಚಂದ್ರಶೇಖರ. ಪ್ರಾಚಾರ್ಯರಾದ ಡಾ.ಟಿ.ಎಂ ಗಂಗಾಧರಸ್ವಾಮಿ.ಇದೇ ಸಂಧರ್ಭದಲ್ಲಿ ಕಾಲೇಜಿನ ಸಿಬ್ಬಂದಿಗಳು ಭಾಗಿಯಾಗಿದ್ದರು.ಕಾರ್ಯಕ್ರಮವನ್ನು ಗೌಸಿಯಾಬೇಗಂ.ಕಲ್ಪನಾ ಪಾಟೀಲ್ ನಿರೂಪಿಸಿದರು. ಉಮೇಸಲ್ಮಾ ಅವರು ಸ್ವಾಗತಿಸಿದರು. ಕುಲ್ಲಯ್ಯಸ್ವಾಮಿ ವಂದಿಸಿದರು.

 


Print   Email

About HSK

The College is affiliated to the Board of Technical Education, Bangalore and approved by the All India Council of Technical Education (AICTE) New Delhi.

Contact Address

HSK Polytechnic( Hanagal Sri Kumareshwara Polytechnic)

Formerly V.V Sangha's Polytechnic

RYMEC Campus
Cantonment
Ballari 583104

   
+91 9620222479 / 08392 242462
   Principal No. 903 534 2462
This email address is being protected from spambots. You need JavaScript enabled to view it.
   
X